ಭೂಪಾಲ್ ನಲ್ಲಿ ಮತ್ತೊಂದು ಭೀಕರ ಅಪಘಾತ…

Spread the love

ಭೋಪಾಲ್, ಜ.2- ಚಾಲಕನ ನಿದ್ದೆಯಿಂದ ಬಲಿಯಾಯಿತು ಮೂರು ಜೀವ… ಬಸ್ ಒಂದು ಗುಜರಾತ್‍ನ ಅಲಿರಾಜ್‍ಪುರ್‍ನಿಂದ ಉದೇಪುರಕ್ಕೆ ಹೋಗುತ್ತಿದ್ದ ಸಮಯದಲ್ಲಿ ಚಾಲಕನು ನಿದ್ದೆಗೆ ಮಂಪರಿಗೆ ಜಾರಿದ್ದರಿಂದ ಬಸ್ ನಿಯಂತ್ರಣ ತಪ್ಪಿ ಮೆಲ್ಖೋದ್ರಾ ನದಿಗೆ ಬಿದ್ದಿದೆ. ಇದರ ಪರಿಣಾಮವಾಗಿ ಒಂದು ವರ್ಷದ ಮಗು ಸೇರಿ ಮೂವರು ಇಹಲೋಕ ತ್ಯಜಿಸಿದ್ದಾರೆ.

ಬಸ್ ಚಲಾಯಿಸುತ್ತಿದ್ದ   ಚಾಲಕ ನಿದ್ದೆಗೆ ಜಾರಿದ್ದರಿಂದ  ಬಸ್ಸು ನದಿಗೆ ಉರುಳಿ ಬಿದ್ದು ಮೂವರು ಪ್ರಯಾಣಿಕರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಅಲಿರಾಜ್‍ಪುರ್ ಜಿಲ್ಲೆಯಲ್ಲಿ ಸಂಭವಿಸಿದೆ. ಬಸ್ ನಲ್ಲಿ  ಮೃತಪಟ್ಟ ಮೂವರು ಗುಜರಾತ್ ಮೂಲದವರೆಂದು ತಿಳಿದುದಿದ್ದು ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಕಾರಿ ಮನೋಜ್ ಪುಷ್ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ಅವಘಡದಲ್ಲಿ ಮೃತಪಟ್ಟ ಒಂದು ವರ್ಷದ ಮಗುವಿನ ವಿವರ ತಿಳಿದು ಬಂದಿಲ್ಲ. ಇನ್ನುಳಿದವರು ಕೈಲಾಶ್ ವೇದ್ (48), ಮೀರಾಬಾಯಿ (46) ಎಂಬುವವರು ಮೃತಪಟ್ಟು, 28 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

 

ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರರಿಗೆ ಒಪ್ಪಿಸಿದ್ದಾರೆ, ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ ಎಂದು ಜಿಲ್ಲಾಕಾರಿ ಮನೋಜ್ ಪುಷ್ಪ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

 

 


Spread the love

Leave a Reply

Your email address will not be published. Required fields are marked *