ವಾಟ್ಸಾಪ್‌ನಿಂದ 9 ವರ್ಷಗಳ ಬಳಿಕ ನೂತನ ಅಪ್‌ಡೇಟ್‌

Spread the love

ನವದೆಹಲಿ: ಹತ್ತು ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌, ಒಂಬತ್ತು ವರ್ಷಗಳ ಬಳಿಕ ಅಪ್‌ಡೇಟ್‌ ಮಾಡಲು ಮುಂದಾಗಿದೆ. ಐಫೋನ್‌ಗೆ ಪರಿಚಯಿಸಲಿರುವ ಹೊಸ ಆವೃತ್ತಿಯ ವಾಟ್ಸಾಪ್‌ನ್ನು ಆಂಡ್ರಾಯ್ಡ್‌ಗೂ ವಿಸ್ತರಿಸಲು ಫೇಸ್‌ಬುಕ್ನ ಸಹಸಂಸ್ಥೆ ನಿರ್ಧರಿಸಿದೆ.

ಆಂಡ್ರಾಯ್ಡ್‌ ಬೀಟಾ ಅಪ್‌ಡೇಟ್‌ನ ಪ್ರಕಾರ 2.20.199.5 ನೇ ವಾಟ್ಸಾಪ್‌ ವರ್ಶನ್‌ನಲ್ಲಿ ಬೇರೆ ಬೇರೆ ಸಂಪರ್ಕ ಸಂಖ್ಯೆಗಳಿಗೆ ಬೇರೆ ಬೇರೆ ವಾಲ್‌ಪೇಪರ್‌ ಅಳವಡಿಸುವ ವ್ಯವಸ್ಥೆಯನ್ನು ಸಂಸ್ಥೆ ಪರಿಚಯಿಸಲಿದೆ ಎಂದು ವಾಟ್ಸಾಪ್‌ ಬೀಟಲ್‌ ಇನ್‌ಫೋ ತಿಳಿಸಿದೆ. ಒಂದೊಮ್ಮೆ ಬಳಕೆದಾರರು ಮೊದಲಿದ್ದ ವಾಲ್‌ಪೇಪರ್‌ ಬಳಸುವುದನ್ನು ಬದಲಿಸಬೇಕೆಂದಲ್ಲಿ ವಾಟ್ಸಾಪ್‌ ವಾಲ್‌ಪೇಪರ್‌ ಎನ್ನುವ ಮತ್ತೊಂದು ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕಾಗುತ್ತದೆ. ಇದು ಗೂಗಲ್‌ ಪ್ಲೇ ಪ್ರಕಾರ 2001ರಲ್ಲಿ ಅಪ್‌ಡೇಟ್‌ ಆಗಿದ್ದು, ಈಗ ಇದರ ನೂತನ ಆವೃತ್ತಿಯನ್ನು ಗೂಗಲ್‌ ಪ್ಲೇನಲ್ಲಿ ಪರಿಚಯಿಸಲು ವಾಟ್ಸಾಪ್‌ ಮುಂದಾಗಿದೆ. ಆದರೆ 2.1 ಹಾಗೂ ನಂತರದ ಆಪರೇಟಿಂಗ್‌ ಸಿಸ್ಟಮ್‌ ಇರುವ ಮೊಬೈಲ್‌ಗಳಲ್ಲಿ ಮಾತ್ರ ಈ ವಾಟ್ಸಾಪ್‌ ಅವೃತ್ತಿ ಕಾರ್ಯ ನಿರ್ವಹಿಸಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.


Spread the love

Leave a Reply

Your email address will not be published. Required fields are marked *