ಕಡಲೆಕಾಯಿ ಸಾಲ ತೀರಿಸೋಕೆ ಹತ್ತು ವರ್ಷದ ನಂತರ ಅಮೇರಿಕಾದಿಂದ ಬಂದ ಮಕ್ಕಳು..

Spread the love

ಕಾಕಿನಾಡ: ಪ್ರಣವ್ ಮತ್ತು ಸುಚಿತಾ ಎಂಬ ಇಬ್ಬರು ಮಕ್ಕಳು ಅಪ್ಪ ಮಾಡಿದ ಕಡಲೆಕಾಯಿಯ ಸಾಲ ತೀರಿಸಲು ಹತ್ತು ವರ್ಷದ ನಂತರ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದಾರೆ.

ಅಮೆರಿಕವಾಸಿಯಾಗಿದ್ದ ಕುಟುಂಬವೊಂದು 2010ರಲ್ಲಿ ರಜಾ ಕಳೆಯಲು ಭಾರತಕ್ಕೆ ಬಂದಿತ್ತು. ಆಗ ಕುಟುಂಬ ಸಮೇತ ಅವರು ಸಮುದ್ರಕ್ಕೆ ತೆರಳಿದ್ದರು. ಆಗ ಅವರ ಕುಟುಂಬದವರು ಅಲ್ಲಿ ಕಡಲೆಕಾಯಿ ಮಾರುತ್ತಿದ್ದ ಅಜ್ಜಿಯೊಬ್ಬರಿಂದ ಕಡಲೆ ಕಾಯಿ ಖರೀದಿಸಿದ್ದರು.

ಕಡಲೆ ಖರೀದಿಸಿದ ನಂತರ ಅದರ ಹಣವನ್ನು ನೀಡಲು ಪ್ರಣವ್  ತಂದೆ ಮುಂದಾದಾಗ  ಅವರು ತಮ್ಮ ಪರ್ಸನ್ನು ಮನೆಯಲ್ಲೇ ಮರೆತು ಬಂದಿದ್ದ ತಿಳಿದು ಬಂದಿತು. ಆಗ ಅವರು ಆ ಅಜ್ಜಿಯ ಫೋಟೊ ತೆಗೆದುಕೊಂಡು, ನಂತರ ಬಂದು ತಾವು ಹಣವನ್ನು ಮರಳಿಸುವುದಾಗಿ ಭರವಸೆ ನೀಡಿ ಹೊರಟು ಬಂದಿದ್ದರು.

ಆದರೆ ಇದಾದ ಸ್ವಲ್ಪ ಸಮಯದಲ್ಲೇ ಅನಿವಾರ್ಯ ಕಾರಣದಿಂದ  ಅಜ್ಜಿಯನ್ನು ಭೇಟಿಯಾಗಲಾಗದೆ ಆ ಕುಟುಂಬ ಅಮೆರಿಕಕ್ಕೆ ವಾಪಸ್ಸಾಗಿತ್ತು. ಅಮೆರಿಕಕ್ಕೆ ವಾಪಸ್ಸಾದ ನಂತರ ಆ ಕುಟುಂಬಕ್ಕೆ ಕಡಲೆಕಾಯಿ ಅಜ್ಜಿಯ ಸಾಲ ಹಿಂದಿರುಗಿಸದೇ ಇದ್ದುದು ನೆನಪಾಗಿತ್ತು. 2010ರಲ್ಲಿ ಆ ಕುಟುಂಬ ಸದಸ್ಯರಾದ ಪ್ರಣವ್ ಗೆ 10 ವರ್ಷ, ಆತನ ತಂಗಿ ಸುಚಿತಾಗೆ ೯ ವರ್ಷವಾಗಿತ್ತು.

ಆಗ ಮಕ್ಕಳಾಗಿದ್ದ ಪ್ರಣವ್ ಗೆ 10 ವರ್ಷ, ಮತ್ತು ಆತನ ತಂಗಿ ಸುಚಿತಾಗೆ ೯ ವರ್ಷವಾಗಿತ್ತು.  ಹತ್ತು ವರ್ಷದ ಬಳಿಕ ತಂದೆಯ ಮಾತನ್ನು ನೆನಪಿನಲ್ಲಿಟ್ಟುಕೊಂಡು ಆ ಮಕ್ಕಳು  ಅಜ್ಜಿಯ ಕಡಲೆಕಾಯಿ ಸಾಲವನ್ನು ತೀರಿಸುವ ಸಲುವಾಗಿಯೇ ಭಾರತಕ್ಕೆ ಬಂದು ಕಾಕಿನಾಡದ ಅಜ್ಜಿಯನ್ನು ಹರಸಾಹಸ ಪಟ್ಟು  ಪತ್ತೆ ಹಚ್ಚಿದ್ದಾರೆ. ಕಡೆಗೂ ಅಜ್ಜಿಯನ್ನು ಪತ್ತೆ ಹಚ್ಚುವಲ್ಲಿ ಅವರಿಬ್ಬರೂ ಗೆದ್ದಿದ್ದು ಹಳ್ಳಿಯಲ್ಲಿದ್ದ  ಕಡಲೆಕಾಯಿ ಅಜ್ಜಿಗೆ 25,000 ರೂ. ನೆರವನ್ನೂ ನೀಡಿದ್ದಾರೆ.

 

ಇದಲ್ಲವೇ ಋಣ ಸಂಧಾಯವೆಂದರೆ?


Spread the love

Leave a Reply

Your email address will not be published. Required fields are marked *