ಸುಶಾಂತ್‌ ಸಿಂಗ್‌‌ ಹೆಸರಿಗೆ ಕ್ಯಾಲಿಫೋರ್ನಿಯಾದಿಂದ ಗುರುತಿಸುವಿಕೆಯ ಪ್ರಮಾಣಪತ್ರ

Spread the love

ಮುಂಬೈ: ಕ್ಯಾಲಿಫೋರ್ನಿಯಾ ಸ್ಟೇಟ್‌ ಅಸೆಂಬ್ಲಿಯು ಇತ್ತೀಚೆಗೆ ವಿವಾದಾತ್ಮಕ ಸಾವಿಗೀಡಾದ ಸುಶಾಂತ್‌ ಸಿಂಗ್‌ ರಾಜಪೂತ್‌ ಹೆಸರಿಗೆ  ಗುರುತಿಸುವಿಕೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದೆ.

ಸುಶಾಂತ್ ಬಾಲಿವುಡ್‌ ಮುಖಾಂತರವಾಗಿ ಭಾರತದ ಶ್ರೇಷ್ಠ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಮಾಡಿರುವ ಸಾಧನೆಗಾಗಿ ಈ ಗೌರವ ಸಲ್ಲಿಸಲಾಗಿದೆ ಎಂದು ಕ್ಯಾಲಿಫೋರ್ನಿಯಾ ಸರ್ಕಾರ ಹೇಳಿಕೊಂಡಿರುವ ಪತ್ರ ವೈರಲ್‌ ಆಗಿದೆ.

ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವ ಸುಶಾಂತ್‌ ಸಹೋದರಿ ಶ್ವೇತಾ ಸಿಂಗ್‌ ಕೀರ್ತಿ, ಭಾರತದ ಸ್ವಾತಂತ್ರ್ಯ ದಿನದಂದು ಕ್ಯಾಲಿಫೋರ್ನಿಯಾ ಸರ್ಕಾರವು ನನ್ನಣ್ಣನನ್ನು ಗೌರವಿಸಿದೆ. ಕ್ಯಾಲಿಫೋರ್ನಿಯಾವು ನಮ್ಮೊಂದಿಗಿದೆ. ಮತ್ತೆ ನೀವು? ಎಂದು ಇನ್‌ಸ್ಟಾ ದಲ್ಲಿ ಬರೆದುಕೊಂಡಿದ್ದಾರೆ.

 


Spread the love

Leave a Reply

Your email address will not be published. Required fields are marked *