ಆಸ್ಪತ್ರೆಗೆ ಮತ್ತೆ ದಾಖಲಾದ ಅಮಿತ್‌ ಶಾ

Spread the love

ನವದೆಹಲಿ: ಮಾರಕ ಕೊರೋನಾ ವೈರಸ್‌ನಿಂದ ಇತ್ತೀಚೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮತ್ತೆ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿನ್ನೆ ತಡರಾತ್ರಿಯೇ ಅಮಿತ್‌ ಶಾ ಆಸ್ಪತ್ರೆಗೆ ದಾಖಲಾಗಿದ್ದರೂ, ಕೇವಲ ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅಮಿತ್‌ ಶಾ ಸಂಪೂರ್ಣ ಗುಣಮುಖರಾಗಿದ್ದಾರೆ. ಸಾಮಾನ್ಯ ಪರೀಕ್ಷೆ ಮಾತ್ರ ಈಗ ನಡೆಯಲಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಏಮ್ಸ್‌ ಮೂಲಗಳು ತಿಳಿಸಿವೆ.

ಕಳೆದ ಆ.೨ರಂದು ದೆಹಲಿಯ ಮೇದಾಂತಾ ಖಾಸಗಿ ಆಸ್ಪತ್ರೆಯಲ್ಲಿ ಅಮಿತ್‌ ಶಾ ಕೊರೊನಾ ಸೋಂಕಿಗೆ ಒಳಪಟ್ಟಿರುವುದು ದೃಢಪಟ್ಟಿತ್ತು. ಅದರಂತೆಯೇ ಆ.೧೮ರಂದು ಏಮ್ಸ್‌ಗೆ ದಾಖಲಾಗಿದ್ದ ಅಮಿತ್‌ ಶಾ, ಆ.೩೧ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು.


Spread the love

Leave a Reply

Your email address will not be published. Required fields are marked *