ಟಿಪ್ಪು ಈ ಮಣ್ಣಿನ ಮಗ ಎಂದ ಬಿಜೆಪಿ ಎಂಎಲ್‌ಸಿ

Spread the love

ಬೆಂಗಳೂರು: ಟಿಪ್ಪು ಯಾವುದೇ ಧರ್ಮವೊಂದಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಟಿಪ್ಪು ಬಗ್ಗೆ ವಿದ್ಯಾರ್ಥಿಗಳು ಓದಿಕೊಳ್ಳಬೇಕು ಎಂದು ಬಿಜೆಪಿ ಎಂಎಲ್‌ಸಿ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

ಆಪರೇಶನ್‌ ಕಮಲದ ಮೂಲಕ ಬಿಜೆಪಿ ಪಾಳಯವನ್ನು ಸೇರಿದ್ದ ಎಚ್‌. ವಿಶ್ವನಾಥ್‌, ಟಿಪ್ಪು ಈ ಮಣ್ಣಿನ ಮಗ. ಪಠ್ಯದಿಂದ ಟಿಪ್ಪು ವಿಚಾರ ಕೈಬಿಟ್ಟಿಲ್ಲ. ಗಾಂಧಿಯಿಂದ ಟಿಪ್ಪುವಿನವರೆಗೆ ಎಲ್ಲ ವಿದ್ಯಾರ್ಥಿಗಳೂ ಓದಿಕೊಳ್ಳಬೇಕು ಎಂದು ವಿಶ್ವನಾಥ್‌ ಹೇಳಿದ್ದಾರೆ.

ರಾಯಣ್ಣನ ತರಾನೇ…

ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ. ಅವರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ದೊರಕಿದೆ. ಹಾಗೆಯೇ ಟಿಪ್ಪು ಸುಲ್ತಾನ್‌ ಕೂಡ ಈ ಮಣ್ಣಿನ ಮಗ ಎಂದು ಬಿಜೆಪಿ ಎಂಎಲ್‌ಸಿ ಹೇಳಿರುವುದು, ಆಗಾಗ್ಗೆ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಾ ಬಂದಿದ್ದ ಬಿಜೆಪಿಗೆ ಇರಿಸುಮುರಿಸು ಉಂಟುಮಾಡಿದೆ.


Spread the love

Leave a Reply

Your email address will not be published. Required fields are marked *