ಶಾಸಕರ ಪೋಸ್ಟ್‌ಗೆ ಪರಿಸ್ಥಿತಿ ಉದ್ವಿಗ್ನ

Spread the love

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್‌ ಅವರು ಮುಸ್ಲಿಂ ವಿರೋಧಿ ಪೋಸ್ಟ್‌ ಹಾಕಿದ್ದಾರೆಂದು ಆರೋಪಿಸಿ, ಕಾವಲ್‌ಭೈರಸಂದ್ರದಲ್ಲಿರುವ ಶಾಸಕರ ಮನೆಯ ಮೇಲೆ ಮುಸ್ಲಿಂ ಸಮುದಾಯದವರಿಂದ ದಾಳಿ ನಡೆದಿದೆ. ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಏರ್ಪಟ್ಟಿದ್ದು, ಪೊಲೀಸ್‌ ಠಾಣೆ ಸೇರಿ, ಶಾಸಕರ ಸಂಬಂಧಿ ನವೀನ್‌ ಮನೆಯ ಮೇಲೂ ದಾಳಿ ನಡೆದಿದೆ.

ಶಾಸಕರ ಸೋದರಳಿಯ ನವೀನ್‌ ಮನೆಯ ಮೇಲೂ ದಾಳಿ ನಡೆದಿದ್ದು, ಉದ್ರಿಕ್ತ ಗುಂಪು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿದ್ದ ಬೈಕುಗಳನ್ನೂ ಸುಟ್ಟುರುಹಿದೆ. ನಗರದ ಎಲ್ಲ ಡಿಜಿಪಿಗಳು ಕೆ.ಜಿ. ಹಳ್ಳಿ ಹಾಗೂ ಡಿಜಿ ಹಳ್ಳಿ ಕಡೆಗೆ ದೌಡಾಯಿಸಿದ್ದು, ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ಶಾಸಕರ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.


Spread the love

Leave a Reply

Your email address will not be published. Required fields are marked *