ಓಣಂಗೆ ಶುಭ ಕೋರಿದ ಪ್ರಧಾನಿ ಮೋದಿ

Spread the love

ನವದೆಹಲಿ: ಪ್ರಧಾನಿ ಮೋದಿ ಓಣಂನ ಶುಭಾಶಯವನ್ನು ಟ್ವಿಟ್ಟರ್‌ ಮೂಲಕ ವ್ಯಕ್ತಪಡಿಸಿದ್ದಾರೆ. ಸೌಹಾರ್ದತೆ ಕಾಯುವ ವಿಶಿಷ್ಟ ಹಬ್ಬ ಓಣಂ ಎಂದು ಮೋದಿ ಹೊಗಳಿದ್ದಾರೆ.

ಓಣಂ ಎನ್ನುವುದು ವಿಶಿಷ್ಟ ಹಬ್ಬವಾಗಿದ್ದು, ರೈತರಿಗೆ ನಮ್ಮ ಕೃತಜ್ಙತೆ ತಿಳಿಸುವ ಸುದಿನವಾಗಿದೆ. ಈ ಹಬ್ಬವು ಎಲ್ಲರಿಗೂ ಆರೋಗ್ಯ, ಭಾಗ್ಯವನ್ನು ಕೊಟ್ಟು ಸುಖವಾಗಿಡಲಿ ಎಂದು ಮನ್‌ ಕೀ ಬಾತ್‌ ನ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡುವ ಮೂಲಕ ಮೋದಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಲಯಾಳಂನಲ್ಲೇ ಟ್ವೀಟ್‌ ಮಾಡಿರುವ ಮೋದಿ, ಓಣಂ ಎನ್ನುವುದು ಇತ್ತೀಚೆಗೆ ಜಾಗತಿಕ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಚಿಂಗಮ್‌ ತಿಂಗಳು ಹೇಗೆ ಆರಂಭವೋ ಹಾಗೆಯೇ ಈ ಹಬ್ಬ ನಮ್ಮ ಜಾಗತಿಕ ಆರ್ಥಕತೆಗೆ ನಾಂದಿಯಾಗಲಿ ಎಂದು ಮೋದಿ ಆಶಿಸಿದ್ದಾರೆ.

ಆ.೨೨ರಿಂದ ಆರಂಭವಾಗಿರುವ ಓಣಂ ಆಚರಣೆ ಸೆ.೨ರವರೆಗೂ ಮುಂದುವರಿಯಲಿದ್ದು, ಮಲಯಾಳಿ ಕ್ಯಾಲೆಂಡರ್‌ ಪ್ರಕಾರ ಚಿಂಗಮ್‌ ಮೊದಲ ತಿಂಗಳಾಗಿರಲಿದೆ. ೧೦ ದಿನಗಳ ಕಾಲ ನಡೆಯುವ ಈ ಆಚರಣೆ ತಿರುಓಣಂ ಮೂಲಕ ಕೊನೆಗಾಣಲಿದೆ.


Spread the love

Leave a Reply

Your email address will not be published. Required fields are marked *