ಡಿಜೆ ಹಳ್ಳಿ ಗಲಭೆ ಪ್ರಕರಣ: ಅನುಮಾನ ಮೂಡಿಸಿದೆ ಬಂಧಿತ ನವೀನ್​ ಮತ್ತೊಂದು ಫೇಸ್ಬುಕ್​ ಶೇರ್!

Spread the love

ಬೆಂಗಳೂರು : ನಗರದ ಡಿ.ಜೆ ಹಳ್ಳಿ ಗಲಭೆಗೆ ಆರೋಪಿ ನವೀನ್​ ಮಾಡಿರುವ ಫೇಸ್​ಬುಕ್​ ಪೋಸ್ಟ್​ ಕಾರಣ ಎಂಬುದು ಸದ್ಯ ಎಲ್ಲರಿಗೂ ತಿಳಿದಿರುವ ಸಂಗತಿ. ಇದೇ ಪ್ರಕರಣದಲ್ಲಿ ಆರೋಪಿ ನವೀನ್​ ಬಂಧನವೂ ಆಗಿದೆ.

ನವೀನ್​ ಬಂಧನವಾಗಿ 30 ಗಂಟೆಗಳು ಕಳೆದಿವೆ. ಮಂಗಳವಾರ ರಾತ್ರಿಯೇ ಆತನ ಬಂಧವಾಗಿತ್ತು. ಇದೀಗ 15 ಗಂಟೆಗಳ ಹಿಂದೆ ನವೀನ್​ ಫೇಸ್​ಬುಕ್​ನಿಂದ ಮತ್ತೊಂದು ಪೋಸ್ಟ್​ ಶೇರ್​ ಆಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಅವರು ಹಿಂದೂ ದೇವರ ಬಗ್ಗೆ ವಾಟ್ಸಪ್ ಮಾಡಿದ್ದರೆನ್ನಲಾದ ಸುದ್ದಿಯು ನವೀನ್​ ಫೇಸ್​ಬುಕ್​ನಲ್ಲಿ ಕಳೆದ 15 ಗಂಟೆಗಳ ಹಿಂದೆ​ ಶೇರ್ ಆಗಿದೆ.

ಆದರೆ, ಪೊಲೀಸ್​ ವಶದಲ್ಲಿರುವ ನವೀನ್​, ತನ್ನ ಮೊಬೈಲ್​ ಕಳೆದುಹೋಗಿದೆ ಎಂದು ಮೊನ್ನೆಯಿಂದಲೂ ಪೊಲೀಸರಿಗೆ ಹೇಳಿಕೆ ನೀಡುತ್ತಿದ್ದಾನೆ. ಇದಕ್ಕೂ ಮುನ್ನ ತನ್ನ ಫೇಸ್​ಬುಕ್​ ಅನ್ನು ಯಾರೋ ಹ್ಯಾಕ್​ ಮಾಡಿದ್ದಾರೆ ಎಂದು ನವೀನ್​ ಆರೋಪಿಸಿದ್ದರು. ಇದೀಗ ಮತ್ತೊಂದು ಪೋಸ್ಟ್​ ಬಂದಿರುವುದು ಅನುಮಾನದ ಹೊಗೆಯಾಡುವಂತಿದೆ.


Spread the love

Leave a Reply

Your email address will not be published. Required fields are marked *