ಕಮಲಾ ಹ್ಯಾರಿಸ್‌ ಅಧ್ಯಕ್ಷರಾದರೆ ಅಮೆರಿಕಕ್ಕೆ ಅವಮಾನ: ಟ್ರಂಪ್‌

Spread the love

ವಾಷಿಂಗ್ಟನ್‌: ಕಮಲಾ ಹ್ಯಾರಿಸ್‌ ಅಧ್ಯಕ್ಷರಾಗಿ ಆಯ್ಕೆಯಾದರೆ ಅಮೆರಿಕನ್ನರಿಗೆ ದೊಡ್ಡ ಮುಖಭಂಗವಾದಂತೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತಾಡಿರುವ ಟ್ರಂಪ್‌, ಅಮೆರಿಕದ ಜನರು ಕಮಲಾ ಹ್ಯಾರಿಸ್‌ರನ್ನು ಇಷ್ಟಪಡುವುದಿಲ್ಲ. ಅವರು ಅಮೆರಿಕದ ಪ್ರಥಮ ಮಹಿಳಾ ಅಧ್ಯಕ್ಷರಾದರೆ ಅಮೆರಿಕಕ್ಕೆ ತೀವ್ರ ಮುಖಭಂಗವಾಗುತ್ತದೆ. ಇಂಥವರನ್ನು ಯಾರೂ ಇಷ್ಟಪಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಜೋ ಬಿಡನ್‌ ಬಗ್ಗೆಯೂ ಮಾತಾಡಿರುವ ಟ್ರಂಪ್‌ ಚೀನಾ ಮಾತ್ರ ಬಿಡನ್‌ ಅಧ್ಯಕ್ಷರಾಗುವುದನ್ನು ಬಯಸುತ್ತಿದೆ. ಬಿಡನ್‌ ಅಧ್ಯಕ್ಷರಾದರೆ ಚೀನಅಕಕೆ ಉಪಕಾರವಾಗುತ್ತದೆ ಹಾಗೂ ಅಮೆರಿಕಕ್ಕೆ ನಷ್ಟವಾಗುತ್ತದೆ ಎಂದಿದ್ದಾರೆ.


Spread the love

Leave a Reply

Your email address will not be published. Required fields are marked *